ಗೌರಿ ಲಕ್ಷ್ಮಿ (ಜನನ ೨ ಆಗಸ್ಟ್ ೧೯೯೩) ಒಬ್ಬ ಭಾರತೀಯ ಸಂಯೋಜಕಿ, ಗಾಯಕಿ, ಗೀತರಚನೆಕಾರ್ತಿ ಮತ್ತು ಕೇರಳದ ಚೆರ್ತಾಲದ ಸಂಗೀತ ನಿರ್ಮಾಪಕಿ . == ಆರಂಭಿಕ ಜೀವನ == ಗೌರಿ ಲಕ್ಷ್ಮಿ ಅವರು ಕೇರಳದ ಅಲಪ್ಪುಳದ ಚೆರ್ತಲಾ ಎಂಬ ಹಳ್ಳಿಯಿಂದ ಬಂದವರು. ಅವರು ಸೇಂಟ್ ಮೇರಿ ಆಫ್ ಲ್ಯೂಕಾ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಅವರು ತ್ರಿಪ್ಪುನಿತುರಾದ ಆರ್‌ಎಲ್‌ವಿ ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್‌ನಲ್ಲಿ ಬಿಎ ಸಂಗೀತ ಕೋರ್ಸ್ ಪಡೆದರು ಮತ್ತು ಕೇರಳ ವಿಶ್ವವಿದ್ಯಾಲಯದಿಂದ ಎಮ್‌ಎ ಯೊಂದಿಗೆ ಹೆಚ್ಚಿನ ಪಾಂಡಿತ್ಯವನ್ನು ಪಡೆದರು. == ವೃತ್ತಿ == ಗೌರಿ ಲಕ್ಷ್ಮಿ ಅವರು ತನ್ನ ೧೩ ನೇ ವಯಸ್ಸಿನಲ್ಲಿ ಮಲಯಾಳಂ ಚಲನಚಿತ್ರ ಕ್ಯಾಸನೋವ್ವಾ ಗೀತೆಯನ್ನು ರಚಿಸುವ ಮೂಲಕ ಚಲನಚಿತ್ರದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಹಾಡಿದ "ಸಖಿಯೇ" ಹಾಡನ್ನು ಇಷ್ಟಪಟ್ಟ ನಿರ್ದೇಶಕ ರೋಶನ್ ಆಂಡ್ರ್ಯೂಸ್, ೨೦೧೨ ರಲ್ಲಿ ಬಿಡುಗಡೆಯಾದ ಅವರ ಮೋಹನ್‌ಲಾಲ್ -ನಟನೆಯ ಕ್ಯಾಸನೋವಾದಲ್ಲಿ ಇದನ್ನು ಬಳಸಿದರು. ಈ ಹಾಡನ್ನು ರಚಿಸಿದಾಗ ಗೌರಿ ಅವರಿಗೆ ಕೇವಲ ೧೩ ವರ್ಷ. ಅವರು ೧೫ ವರ್ಷದವರಿದ್ದಾಗ ಈ ಹಾಡನ್ನು ಸಿನಿಮಾದಲ್ಲಿ ಬಳಸಲಾಗಿತ್ತು. ಭಾರತದ ಅತ್ಯಂತ ಕಿರಿಯ ಸಂಯೋಜಕರಾಗಿ, ಗೌರಿ ಅವರ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಯಿತು ಮತ್ತು ಆಗ ವ್ಯಾಪಕ ಮಾಧ್ಯಮ ಪ್ರಸಾರವನ್ನು ಪಡೆಯಿತು. ಗೌರಿ ಅವರು ಲಂಡನ್‌ನ ಟ್ರಿನಿಟಿ ಕಾಲೇಜ್‌ನಿಂದ ಪ್ರದರ್ಶಕರ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಗೌರಿ ಅವರು ಸಂಗೀತ ನಿರ್ದೇಶಕ ಪ್ರಶಾಂತ್ ಪಿಳ್ಳೈ ಅವರಿಗೆ ಏಳು ಸುಂದರ ರಾತ್ರಿಗಳು ಚಿತ್ರದಲ್ಲಿ ಹಿನ್ನಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು, ನಂತರ ಲಾರ್ಡ್ ಲಿವಿಂಗ್ಸ್ಟೋನ್ ೭೦೦೦೦ ಕಂಡಿ ಚಿತ್ರದಲ್ಲಿ ರೆಕ್ಸ್ ವಿಜಯನ್ ಅವರ ಕಾಲಂ ಪಡುನ್ನೆ ಹಾಡನ್ನು ಹಾಡಿದರು. ಅಂದಿನಿಂದ ಅವರು ಮಲಯಾಳಂ ಮತ್ತು ತಮಿಳಿನ ಹಲವಾರು ಚಿತ್ರಗಳಲ್ಲಿ ಹಾಡಿದ್ದಾರೆ. ಗೌರಿ ಮಲಯಾಳಂ ಚಿತ್ರ ಗೋಧಾದಲ್ಲಿ ಆರೋ ನೆಂಜಿಲ್ ಹಾಡನ್ನು ಹಾಡಿದಾಗ ಗಾಯಕಿಯಾಗಿ ಅವರ ಪ್ರಗತಿಯು ಹೆಚ್ಚಿತು. ೨೦೧೫ ರಲ್ಲಿ, ಗೌರಿ ತನ್ನ ಚೊಚ್ಚಲ ಸ್ವತಂತ್ರ ಸಂಗೀತ ವೀಡಿಯೋವನ್ನು ಥೋನಿ ಎಂಬ ಶೀರ್ಷಿಕೆಯಲ್ಲಿ ನಿರ್ಮಿಸಿದರು, ಇದು ಅವರು ಸ್ವತಃ ಬರೆದು, ಸಂಯೋಜಿಸಿ ಮತ್ತು ಹಾಡಿದ ಮೊದಲ ಸಿಂಗಲ್ ಆಗಿದ್ದು, ಇದು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಗೌರಿ ಲಕ್ಷ್ಮಿ ಅವರು ತಮ್ಮ ಹೊಸ ವೀಡಿಯೊಗೆ ಕ್ರೌಡ್‌ಫಂಡಿಂಗ್ ಮಾಡುತ್ತಿದ್ದಾರೆ, ಇದು ಮಲಯಾಳಂ ಇಂಡೀ ಮ್ಯೂಸಿಕ್ ಆರಾರೋದಲ್ಲಿ ಹೊಸ ಉಪಕ್ರಮವಾಗಿದೆ. ಅವರು ಕಪ್ಪಾ ಟಿವಿ ಮ್ಯೂಸಿಕ್ ಮೋಜೋದಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ಸುಮಾರು ೧೫ ಸ್ವಂತ ಸಂಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ. ಗೌರಿ ಲಕ್ಷ್ಮಿ ಅವರು ಚೆನ್ನೈನಲ್ಲಿ ನೆಲೆಸಿರುತ್ತಾರೆ. ಅವರು ತಮ್ಮ ಸಮಯವನ್ನು ತಮ್ಮ ಬ್ಯಾಂಡ್ ಮತ್ತು ಹೊಸ ಸಂಯೋಜನೆಗಳ ನಡುವೆ ವಿಭಜಿಸುತ್ತಾರೆ. ಅವರು ಕೆಲವು ಹೊಸ ಸಂಯೋಜನೆಗಳನ್ನು ತಮ್ಮ ಪತಿಯೊಂದಿಗೆ ಮತ್ತು ಡ್ರಮ್ಮರ್ ಗಣೇಶ್ ವೆಂಕಿತರಾಮಿ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಗಣೇಶ್ ಅವರನ್ನು ಹೊರತುಪಡಿಸಿ, ಅವರ ಬ್ಯಾಂಡ್‌ನಲ್ಲಿರುವ ಇತರರು ಐಸಾಕ್ ಧರ್ಮಕುಮಾರ್, ಜಾನ್ ಪ್ರವೀಣ್ ಮತ್ತು ಗಾಡ್ಫ್ರೇ ಇಮ್ಯಾನುಯೆಲ್. == ಧ್ವನಿಮುದ್ರಿಕೆ == === ಚಲನಚಿತ್ರಗಳು === === ಸಿಂಗಲ್ಸ್ / ಸಂಗೀತ ವೀಡಿಯೊಗಳು === === ಆಲ್ಬಮ್‌ಗಳು === == ಉಲ್ಲೇಖಗಳು ==